Bigg Boss Kannada Season 5 : ಮನೆಗೆ ವಾಪಾಸ್ ಬಂದ ತೇಜಸ್ವಿನಿ | Filmibeat Kannada

2017-11-11 1

Bigg Boss Kannada 5: Week 4: Tejaswini returns to Bigg Boss Show.

'ಬಿಗ್ ಬಾಸ್' ಮನೆಯಲ್ಲಿ ನಟಿ ತೇಜಸ್ವಿನಿ ಮತ್ತೆ ಪ್ರತ್ಯಕ್ಷ.! ತಂದೆಗೆ ಅನಾರೋಗ್ಯ ಉಂಟಾದ ಕಾರಣದಿಂದ 'ಬಿಗ್ ಬಾಸ್' ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿದ್ದ ನಟಿ ತೇಜಸ್ವಿನಿ ಇದೀಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಮರಳಿದ್ದಾರೆ. 'ದೊಡ್ಮನೆ'ಯೊಳಗೆ ನಟಿ ತೇಜಸ್ವಿನಿ ಪ್ರತ್ಯಕ್ಷವಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ 'ಒಗ್ಗಟ್ಟಿನಲ್ಲಿ ಬಲವಿದೆ' ಲಕ್ಷುರಿ ಬಜೆಟ್ ಟಾಸ್ಕ್ ಮುಕ್ತಾಯಗೊಂಡ ಬಳಿಕ ನಟಿ ತೇಜಸ್ವಿನಿ 'ದೊಡ್ಮನೆ'ಯೊಳಗೆ ಆಗಮಿಸಿದರು. ತೇಜಸ್ವಿನಿ ವಾಪಸ್ ಆಗುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಯಲ್ಲಿ ಸಂತಸ ಮನೆ ಮಾಡಿತ್ತು. ''ಅಪ್ಪ ಇನ್ನೂ ಹುಷಾರಾಗಿಲ್ಲ. ಎರಡು ಕಿಡ್ನಿಗೂ ಸೋಂಕು ತಗುಲಿದೆ. ಡೈಯಾಲಿಸಿಸ್ ನಡೆಯುತ್ತಿದೆ. ಹೃದಯ ಸಂಬಂಧಿ ಖಾಯಿಲೆ ಕೂಡ ಇದೆ. ಚಿಕಿತ್ಸೆ ನಡೆಯುತ್ತಿದೆ'' ಅಂತ ತೇಜಸ್ವಿನಿ ತಿಳಿಸಿದ್ದಾರೆ.''ನನಗೆ ನನ್ನ ಅಪ್ಪನೇ ಶಕ್ತಿ. ನಾನು ಇಲ್ಲಿಂದ ಹೊರಗೆ ಹೋಗಲು ನನ್ನ ತಂದೆ ಕಾರಣ. ಪುನಃ ವಾಪಸ್ ಬರಲು ನನ್ನ ತಂದೆ ಕಾರಣ. ನೀನು ಒಳಗಡೆ ಇರಬೇಕು. ನನ್ನಿಂದ ನೀನು ಹೊರಗೆ ಬರಬಾರದು ಅಂತ ಹೇಳುತ್ತಿದ್ದರು'' ಎಂದರು ತೇಜಸ್ವಿನಿ

Videos similaires